Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪಿಲಿಕುಲದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ

Advertisement

ಮಂಗಳೂರು: ಪಿಲಿಕುಲ ಜೈವಿಕ ಉದ್ಯಾನವನದಲ್ಲಿ 14ರ ಹರೆಯದ “ರಾಣಿ” ಹೆಸರಿನ ಹುಲಿ ಡಿ.20ರಂದು ರಾತ್ರಿ ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ.

ರಾಣಿಯು 2016ರಲ್ಲಿ ದಾಖಲೆ ಸಂಖ್ಯೆಯ ಐದು ಆರೋಗ್ಯವಂತ ಮರಿಗಳಿಗೆ ಹಾಗೂ 2021ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು.

ಪ್ರಸ್ತುತ ಪಿಲಿಕುಲ ಮೃಗಾಲಯ ದಲ್ಲಿ ಹುಲಿಗಳ ಸಂಖ್ಯೆ 10ಕ್ಕೇರಿದೆ. ಈ ಪೈಕಿ 4 ಗಂಡು ಮತ್ತು 4 ಹೆಣ್ಣು ಹುಲಿಗಳಿವೆ. ಈಗ ಜನಿಸಿದ ಮರಿಗಳ ಲಿಂಗವನ್ನು ಎರಡು ತಿಂಗಳ ಬಳಿಕ ಗುರುತಿಸಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್‌.ಜಯಪ್ರಕಾಶ್‌ ಭಂಡಾರಿ ತಿಳಿಸಿದ್ದಾರೆ.

ಮೂರು ಮರಿಗಳಿಗೆ ಜನ್ಮ ನೀಡಿದ ಹುಲಿ ‘ರಾಣಿ’
“ರಾಣಿ’ಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮ ಮೂಲಕ ಬನ್ನೇರು ಘಟ್ಟದಿಂದ ತರಲಾಗಿದ್ದು, ಅಲ್ಲಿಗೆ ಇಲ್ಲಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು.

Related posts

Leave a Comment