ಬೆಂಗಳೂರು: ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯ ಸರವನ್ನು ಕಿಟಿಕಿಯಿಂದ ಕದ್ದು ಖತರ್ನಕ್ ಕಳ್ಳ ಪರಾರಿಯಾಗಿರುವಂತಹ ಘಟನೆ ನಗರದ ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 10ರಂದು ನಡೆದ ಘಟನೆಯ ವಿಡಿಯೋ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆ ಆಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ಓರ್ವ ಮಹಿಳೆ ದೇವರ ಭಜನೆಯಲ್ಲಿ ಮಗ್ನರಾಗಿ ಬಿಟ್ಟಿದ್ದಾರೆ. ಈ ವೇಳೆ ಖತರ್ನಕ್ ಕಳ್ಳ ಬಂದಿದ್ದು, ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದಾನೆ.
ಅತ್ತ ಕಳ್ಳ ಸರ ಎಳೆಯುತ್ತಿದ್ದಂತೆ ಮಹಿಳೆ ಜೋರಾಗಿ ಕೂಗಿಕೊಳ್ಳುತಾ, ತಪ್ಪಿಸಿಕೊಳ್ಳುವಾಗ ಕಟ್ಟಾಗಿ ಅರ್ಧ ಸರ ಕಳ್ಳನ ಕೈಸೇರಿದೆ. ಸುಮಾರು ಮೂವತ್ತು ಗ್ರಾಂ ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಿದ ನಂದಿನಿ ಲೇಔಟ್ ಪೊಲೀಸ್ ತನಿಖೆ ಆರಂಭಿಸಿದ್ದಾರೆ.