ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದು ನೆಲೆಸಿದ್ದ ಶಂಕಿತ ಉಲ್ಫಾ ಉಗ್ರನ ಬಂಧನದ ಬೆನ್ನಲ್ಲೇ ಇದೀಗ ಮತ್ತೆ ಓರ್ವ ಪಾಕಿಸ್ತಾನಿ ಸೇರಿದಂತೆ ನಾಲ್ವರು ವಿದೇಶಿ ಪ್ರಜೆಗಳನ್ನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ವಾಸವಿದ್ದ ಕುಟುಂಬ. ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳು ಅಕ್ರಮವಾಗಿ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ರಾತ್ರಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು. ಈ ವೇಳೆ ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಬಂಧಿಸಿದ ಪೊಲೀಸರು.
ಬಂಧಿತ ಪಾಕ್ ಪ್ರಜೆ ಧರ್ಮದ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೊನೆಗೆ ಅಲ್ಲಿ ಇರೋಕೆ ಆಗದೆ ದೇಶ ತೊರೆದು ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿ ಢಾಕಾದಲ್ಲಿ ವಾಸವಾಗಿದ್ದ. ಈ ವೇಳೆ ಢಾಕಾದಲ್ಲಿ ಬಾಂಗ್ಲಾ ಯುವತಿ ಪರಿಚಯವಾಗಿದ್ದಾಳೆ. ಅವಳೊಂದಿಗೆ ಮದುವೆ ಮಾಡಿಕೊಂಡು ಬಳಿಕ 2014ರಲ್ಲಿ ಪತ್ನಿ ಜೊತೆ ಬಾಂಗ್ಲಾದಿಂದಲೂ ಎಸ್ಕೇಪ್ ಆಗಿ ಸೀದಾ ದೆಹಲಿಗೆ ಬಂದು ಇಳಿದಿದ್ದ ಪಾಕಿಸ್ತಾನಿ!
ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿ ಸ್ಥಳೀಯರ ಪರಿಚಯ ಮಾಡಿಕೊಂಡು ವ್ಯಕ್ತಿಯೊಬ್ಬನ ನೆರವಿನಿಂದ ಭಾರತೀಯನು ಸ್ಥಳೀಯ ನಿವಾಸಿಯೆಂದು ಗುರುತಿಸಲು ಆಧಾರ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ದಾಖಲೆಗಳನ್ನು ಸೃಷ್ಟಿಕೊಂಡಿದ್ದಾನೆ. 2018ರವರೆಗೆ ದೆಹಲಿಯಲ್ಲಿ ನೆಲೆಸಿ ಬಳಿಕ ಅಲ್ಲಿಂದ ಪತ್ನಿ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಬೆಂಗಳೂರಿನ ಜಿಗಣಿಯಲ್ಲಿ ಇಬ್ಬರು ಮಕ್ಕಳೊಂದಿಗೆ 2018 ರಿಂದಲೇ ನೆಲೆಸಿದ್ರೂ ಪೊಲೀಸರಿಗೆ ತಿಳಿದೇ ಇಲ್ಲ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸುಳಿವು ಸಿಕ್ಕಿದೆ.
ಬೆಂಗಳೂರಿನಲ್ಲಿ ಪಾಕಿಸ್ತಾನ ಪ್ರಜೆಗಳು ನುಸುಳಿರುವ ಬಗ್ಗೆ ಅನುಮಾನಗೊಂಡ ಗುಪ್ತಚರ ಅಧಿಕಾರಿಗಳು ಆ ಬಗ್ಗೆ ಮಾಹಿತಿ ಕಲೆಹಾಕಿ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು. ಸದ್ಯ ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆಯಷ್ಟೇ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನೆಲೆಸಿದ್ದ ಉಲ್ಫಾ ಸಂಘಟನೆಗೆ ಸೇರಿರುವ ಶಂಕಿತ ಉಗ್ರ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆಗಸ್ಟ್ನಲ್ಲಿ ಗುವಾಹಟಿಯಲ್ಲಿಯೇ ಐದು IED ಬಾಂಬ್ ಇಟ್ಟು, ಕುಟುಂಬ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದನು.
ಜಿಗಣಿಯ ಖಾಸಗಿ ಕಂಪನಿಯೊಂದರಲ್ಲಿ ಗೌತಮ್ ಎನ್ನುವ ಹೆಸರಲ್ಲಿ ಗಿರೀಶ್ ಬೋರಾ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದನು. ಗಿರೀಶ್ ಬೋರಾನ ಬಗ್ಗೆ ಪಕ್ಕಾ ಮಾಹಿತಿ ಕಲೆಹಾಕಿದ್ದು ಅಸ್ಸಾಂ ಎನ್ಐಎ ತಂಡ ಶಂಕಿತ ಉಗ್ರನನ್ನು ಬಂಧಿಸಿತ್ತು. ಉಲ್ಫಾ ಉಗ್ರನ ಬೆನ್ನಲ್ಲೇ ಮತ್ತೆ ಇದೀಗ ಪಾಕಿಸ್ತಾನಿ ಸೇರಿ ನಾಲ್ವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿರುವುದು ಬೆಂಗಳೂರು ಉಗ್ರರ ಸೇಫ್‌ಸಿಟಿ ಆಗಿದೆಯೇ ಎಂಬ ಅನುಮಾನ ಮೂಡಿಸಿದೆ.
Pakistani national, family arrested at Jigani in Bengaluru with fake identify documents
In a joint operation by Central agencies, the Jigani police arrested a Pakistani man along with his wife and in-laws, who were living on the outskirts of Bengaluru allegedly with fake identities for the last six years. The arrest comes close on the heels of the NIA arresting an absconding accused in the Assam ULFA IED case who was hiding in Jigani working as a security guard.
On September 26, the NIA, with the help of Jigani police, had picked up a 26-year-old Assamese man from Jigani Industrial Area. He is suspected to have improvised explosive devices (IED)-like substances to carry out blasts in Assam on August 15.