ಕಾರ್ಕಳ: ಜೊತೆಯಾಗಿ ಜೀವನ ಸಾಗಿಸುವ ಜೋಡಿ ಸಾವಿನಲ್ಲೂ ಒಂದಾದ ಅಪರೂಪದ ಮನಕಲಕುವ ಘಟನೆ ನಡೆದಿದೆ. ಪತ್ನಿ ಸಾವನ್ನಪ್ಪಿದ ಮರುದಿನವೇ ಪತಿಯೂ ಅಸುನೀಗಿದ್ದಾರೆ. ಇಂತಹದೊಂದು ಹೃದಯ ವಿದ್ರಾವಕ ಘಟನೆ ಕಾರ್ಕಳದಿಂದ ವರದಿಯಾಗಿದೆ.
ಒಂದು ದಿನದ ಅಂತರದಲ್ಲಿ ದಂಪತಿ ನಿಧನ ಹೊಂದಿ ಸಾವಿನಲ್ಲೂ ಒಂದಾದ ಘಟನೆಯು ಉದ್ಯಾವರದಲ್ಲಿ ಶುಕ್ರವಾರ(ನ.29ರಂದು) ನಡೆದಿದೆ.
ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್ ರೆಬೆಲ್ಲೋ (56)ಅವರು ನ.28ರಂದು ನಿಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್ ಡೇಸ (62)ಅವರು ಅಸೌಖ್ಯದಿಂದ ನ.29ರಂದು ನಿಧನ ಹೊಂದಿದ್ದಾರೆ.
ಒಂದೇ ದಿನದ ಅಂತರದಲ್ಲಿ ತಂದೆ ತಾಯಿಯ ಅಗಲುವಿಕೆ ಮಕ್ಕಳಿಗೆ ಅತೀವ ದುಃಖ ತರಿಸಿದೆ. ಪುತ್ರ, ಪುತ್ರಿಯನ್ನು ದಂಪತಿ ಅಗಲಿದ್ದಾರೆ.