ಸುರತ್ಕಲ್ : ನಿಯಂತ್ರಣ ಕಳೆದುಕೊಂಡ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು 5 ಅಡಿ ಆಳದ ಹೊಂಡಕ್ಕೆ ಬಿದ್ದು ದಂಪತಿಗೆ ಗಾಯಗೊಂಡಿರುವ ಘಟನೆ ಜೋಕಟ್ಟೆ ಕಳವಾರು ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಸುರತ್ಕಲ್ ಕಾನ ಕಾಪ್ರಿಗುಡ್ಡ ನಿವಾಸಿ ರವಿ ಮತ್ತು ಅವರ ಪತ್ನಿ ಗಾಯಗೊಂಡವರು ಎಂಬುವುದಾಗಿ ತಿಳಿದು ಬಂದಿದೆ. ಗಾಯಗೊಂಡ ದಂಪತಿಗಳನ್ನು ಕಾನದ ಆಸ್ಪತ್ರೆಗೆ ರವಾನಿಸಲಾಗಿದೆ.
ರವಿ ಅವರು ಪತ್ನಿಯೊಂದಿಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಅವರು ಜೋಕಟ್ಟೆ ಕಳವಾರು ಬಳಿ ತಲುಪಿದಾಗ, ಕಾರಿನ ಬ್ರೇಕ್ ಫೇಲ್ ಆಗಿದ್ದು, ಕಾರನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದಾಗ ಅದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಒಂದು ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು, ಹೈಟೆನ್ಷನ್ ವಯರ್ ರಸ್ತೆ ಮೇಲೆ ಬಿದ್ದಿದೆ. ಅಪಘಾತದ ಪರಿಣಾಮವಾಗಿ ಕಾರು ಜೋಕಟ್ಟೆ ಬಜ್ಪೆ ರಸ್ತೆಗೆ ಉರುಳಿದೆ ಎಂದು ತಿಳಿದು ಬಂದಿದೆ.
