ಕಳೆದ 11 ತಿಂಗಳಿoದ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿದ್ದ 93 ವರ್ಷದ ಅಜ್ಜಿಗೆ ಪೆರೋಲ್ ಭಾಗ್ಯ ಸಿಕ್ಕಿದೆ. ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಜ್ಜಿ ನಾಗಮ್ಮ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ವಯೋಸಹಜ ಕಾರಣದಿಂದ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿರುವ ಇವರನ್ನು ಜೈಲಿನ ಮಹಿಳಾ ಸಿಬ್ಬಂದಿ ಅವರ ಆರೈಕೆ ಮಾಡುತ್ತಿದ್ದರು. ಮಲ-ಮೂತ್ರಕ್ಕೂ ಎದ್ದು ಹೋಗದ ಸ್ಥಿತಿಯಲ್ಲಿರುವ ನಾಗಮ್ಮಳಿಗೆ ಜೈಲು ಸಿಬ್ಬಂದಿ ಕೈದಿಗಳಂತೆ ಕಾಣದೇ ಮಾತೃ ವಾತ್ಸಲ್ಯದಿಂದ ಆರೈಕೆ ಮಾಡುತ್ತಿದ್ದರು. ಸದ್ಯ ಇವರಿಗೆ ಪೆರೋಲ್ ಭಾಗ್ಯ ಸಿಕ್ಕಿದೆ.
ಉಪ ಲೋಕಾಯುಕ್ತ ನ್ಯಾ. ಬಿ ವೀರಪ್ಪ ಜೈಲಿಗೆ ಭೇಟಿ ಕೊಟ್ಟ ವೇಳೆ ಅಜ್ಜಿ ನಾಗಮ್ಮಳ ಸ್ಥಿತಿಗೆ ಮರುಗಿ ಸುಪ್ರೀಂಕೋರ್ಟ್ ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸೂಚಿಸಿದ್ರು. ಸದ್ಯ ಪ್ರಕ್ರಿಯೆ ಇನ್ನೂ ಪೂರ್ಣ ಗೊಂಡಿಲ್ಲದಿದ್ದರೂ ಜೈಲು ಅಧಿಕಾರಿಗಳು ಅಜ್ಜಿ ನಾಗಮ್ಮಳನ್ನ 90 ದಿನಗಳ ಪೆರೋಲ್ ನೀಡಿ ಬಿಡುಗಡೆ ಮಾಡಿದ್ದಾರೆ. ಸದ್ಯ ನಡೆಯಲೂ ಆಗದ ಅಜ್ಜಿ ನಾಗಮ್ಮಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಜ್ಜಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿರುವ ಇವರಿಗೆ ಪೆರೋಲ್ ಸಿಕ್ಕಿದ್ದು, ಮನೆಗೆ ಕರೆದುಕೊಂಡು ಹೋಗಿದ್ದಾರೆ.