Mangalore and Udupi news
ಪ್ರಸ್ತುತರಾಜ್ಯ

8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟ

Advertisement

ಅಬ್ಬಬ್ಬಾ..! ಎಂಟು ತಿಂಗಳ ಟಗರೊಂದು ದಾಖಲೆಯ ಮೊತ್ತಕ್ಕೆ ಹರಾಜು ಆಗಿದೆ. ಮಾಂಸದ ದೃಷ್ಟಿಯಿಂದ ಅಲ್ಲದೆ, ತಳಿ ಅಭಿವೃದ್ಧಿಗೆ ಟಗರೊಂದು ಲಕ್ಷಾಂತರ ಮೌಲ್ಯಕ್ಕೆ ಮಾರಾಟ ಆಗಿ ಸುದ್ದಿಯಾಗಿದೆ.

ಹೌದು. ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. ಕೇವಲ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಎಂಬುವವರ ಮನೆಯಲ್ಲಿ ಟಗರು ಜನಸಿದೆ. ಕೆಲ ದಿನಗಳ ಬಳಿಕ ಟಿ.ನರಸೀಪುರದ ಮೂಲದವರಿಗೆ ಉಲ್ಲಾಸ್ 20 ಸಾವಿರಕ್ಕೆ ಟಗರು ಮಾರಾಟ ಮಾಡಿದ್ದರು.

ಮತ್ತೆ ವಾಪಸ್ಸು 50 ಸಾವಿರಕ್ಕೆ ಅದೇ ಟಗರನ್ನು ಉಲ್ಲಾಸ್ ಹಾಗೂ ಅವರ ತಂದೆ ಮನೋಹರ್ ಖರೀದಿಸಿದ್ದರು. ಇದೀಗ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಎಂಬುವರಿಗೆ ಉಲ್ಲಾಸ್ ಅದೇ ಟಗರನ್ನು 1.48 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಉಲ್ಲಾಸ್ ತಂದೆ ಮನೋಹರ್ ಅವರಿಗೆ ಜವಾದ್ ಸನ್ಮಾನಿಸಿ, 1.48 ಲಕ್ಷ ಹಣ ನೀಡಿ ಟಗರು ಕೊಂಡೊಯ್ದರು.

ಇನ್ನು, ಮಾಂಸದ ದೃಷ್ಟಿಕ್ಕಿಂತ ಹೆಚ್ಚಾಗಿ ಬಂಡೂರು ತಳಿ ಅಭಿವೃದ್ದಿಗಾಗಿ ಈ ಟಗರು ಕೊಂಡುಕೊಳ್ಳಲಾಗಿದೆ ಎಂದು ಜವಾದ್ ಹೇಳಿದರು.

Related posts

Leave a Comment