Mangalore and Udupi news
ದೇಶ- ವಿದೇಶಪ್ರಸ್ತುತ

ಪುಲ್ವಾಮಾ ದಾಳಿ ಕರಾಳ ದಿನಕ್ಕೆ 6 ವರ್ಷ..! 12 ದಿನಗಳ ನಂತರ ದಿಟ್ಟ ಉತ್ತರ ನೀಡಿತ್ತು ಭಾರತೀಯ ಸೇನೆ

ಇಂದು ಭಾರತಾದಾದ್ಯಂತ ಬ್ಲಾಕ್ ಡೇ ಶೋಕಾಚರಣೆ ಮಾಡಲಾಗುತ್ತಿದೆ. 6 ವರ್ಷಗಳ ಹಿಂದೆ ನಡೆದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದುವೇ ಪುಲ್ವಮಾ ದಾಳಿ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಎಫ್) ಬೆಂಗಾವಲು ಪಡೆಯು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಯೋಧರ ಮೇಲೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ಗಾಡಿ ಡಿಕ್ಕಿ ಹೊಡೆದು ನಲ್ವತ್ತು ಯೋಧರು ಪ್ರಾಣ ತ್ಯಾಗ ಮಾಡಿದ್ದರು.

ಅವಂತಿಪೋರಾದ ಗೋರಿಪೋರಾದಲ್ಲಿ ನಡೆದ ಈ ವಿನಾಶಕಾರಿ ದಾಳಿಯಲ್ಲಿ 40 ಸಿಆರ್‌ಎಫ್ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಹುತಾತ್ಮ ಸೈನಿಕರಿಗೆ ದೇಶವು ಶೋಕ ವ್ಯಕ್ತಪಡಿಸುವ ಹಿನ್ನಲೆ ದಾಳಿ ಪ್ರತಿ ವರ್ಷ ಫೆಬ್ರವರಿ 14ರಂದು ಭಾರತದಲ್ಲಿ ಬ್ಲಾಕ್ ಡೇ ಆಗಿ ಆಚರಿಸಲಾಗುತ್ತದೆ.

ಪುಲ್ವಾಮಾ ದಾಳಿಯ ಹನ್ನೆರಡು ದಿನಗಳ ನಂತರ, ಭಾರತ ಪಾಕಿಸ್ತಾನದ ಬಾಲಕೋಟ್ ಮೇಲೆ ಪ್ರತೀಕಾರದ ವಾಯುದಾಳಿ ನಡೆಸಿತು. ಫೆಬ್ರವರಿ 25ರ ರಾತ್ರಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು. ಜೈಶ್-ಎ-ಮೊಹಮ್ಮದ್ ತರಬೇತಿ ಸೌಲಭ್ಯಗಳ ಮೇಲೆ ಸುಮಾರು 1,000 ಕೆಜಿ ಬಾಂಬ್‌ಗಳನ್ನು ಹಾಕುವುದರೊಂದಿಗೆ ಸುಮಾರು 300 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 1971ರ ನಂತರ ಭಾರತೀಯ ವಾಯುಪಡೆಯು ಎಲ್‌ಒಸಿಯನ್ನು ದಾಟಿ ಪಾಕಿಸ್ತಾನದ ಪ್ರದೇಶದೊಳಗೆ 65 ಕಿ.ಮೀ ಆಳಕ್ಕೆ ನುಗ್ಗಿ ಬಾಲಕೋಟ್ ಪ್ರದೇಶದಲ್ಲಿ ಜೈಶ್ ಶಿಬಿರವನ್ನು ಧ್ವಂಸಗೊಳಿಸಿದ್ದು ಇದೇ ಮೊದಲು. ಪಾಕಿಸ್ತಾನಕ್ಕೆ ತಿಳಿಯದಂತೆ ಅತ್ಯಂತ ಗೌಪ್ಯವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ನಂತರ ಬಾಲಕೋಟ್ ವಾಯುದಾಳಿ ಎಂದು ಕರೆಯಲ್ಪಟ್ಟ ಈ ನಿರ್ಣಾಯಕ ಕ್ರಮವು, ಭಾರತವು ಅಂತಹ ದಾಳಿಗಳಿಗೆ ಉತ್ತರಿಸದೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವಾಗಿತ್ತು.

ಪುಲ್ವಾಮಾ ದಾಳಿಯನ್ನು 1989ರ ನಂತರ ಕಾಶ್ಮೀರದಲ್ಲಿ ಭಾರತದ ರಾಜ್ಯ ಭದ್ರತೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ. ಪುಲ್ವಾಮಾ ದಾಳಿಯ ಭೀಕರತೆಯನ್ನು ನಾವು ಎದುರಿಸಿ 6 ವರ್ಷಗಳಾಗಿವೆ, ಆದರೆ ಇಂದಿಗೂ ಫೆಬ್ರವರಿ 14ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಸಿಆರ್‌ಪಿಎಫ್ ಜವಾನರ ನೆನಪಿಗಾಗಿ ಭಾರತದಲ್ಲಿ ಬ್ಲಾö್ಯಕ್ ಡೇ ಆಚರಿಸಲಾಗುತ್ತದೆ.

Related posts

Leave a Comment