ರಾಜ್ಯದ ಜನತೆಗೆ ಸರ್ಕಾರದಿಂದ 5 ಲಕ್ಷ ರೂ. ಗೆಲ್ಲುವಂತಹ ಬಂಪರ್ ಆಫರ್ ನೀಡಿದೆ. ರಾಜ್ಯದ ಬೀದರ್‌ನಲ್ಲಿ ಹಾಡಹಗಲೇ ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣದ ಪೆಟ್ಟಿಗೆಯನ್ನು ಹೊತ್ತೊಯ್ದ ಇಬ್ಬರು ದರೋಡೆಕೋರರ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಹಣವನ್ನು ನೀಡುವುದಾಗಿ ಪೊಲೀಸ್ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಬೀದರ್ ದರೋಡೆ ಪ್ರಕರಣದ ಆರೋಪಿಗಳ ಸುಳಿವು ಕೊಟ್ಟವರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಬೀದರ್ ನಗರದಲ್ಲಿ ಕಳೆದ ತಿಂಗಳು ಜ.16ರಂದು ಹಾಡುಹಗಲೆ ನಡು ರಸ್ತೆಯಲ್ಲಿಯೇ ಗುಂಡಿನ ದಾಳಿ ನಡೆಸಿ ಒಬ್ಬರನ್ನು ಕೊಲೆ ಮಾಡಿ 93 ಲಕ್ಷ ರೂ. ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಈ ಕೃತ್ಯ ಎಸಗಿದ ಹಂತಕರು ಬಿಹಾರ ಮೂಲದವರು ಎಂದು ಪೊಲೀಸ್ ಇಲಾಖೆ ಖಚಿತಪಡಿಸಿದೆ. ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಅಮನ್ ಕುಮಾರ್ ತಂದೆ ಕಿಶೋರ್ ಸಿಂಗ್ ಹಾಗೂ ಅಲೋಕ್ ಕುಮಾರ್ ಅಲಿಯಾಸ ಅಶುತೋಷ್ ತಂದೆ ಶತ್ರುಘನ್ ಪ್ರಸಾದ್ ಸಿಂಗ್ ಎಂಬುವವರೇ ದರೋಡೆಕೋರರಾಗಿದ್ದಾರೆ.
ಇನ್ನು ಪೊಲೀಸ್ ಇಲಾಖೆಯಿಂದ ಬೀದರ್‌ನ ದರೋಡೆ ದುಷ್ಕೃತ್ಯ ನಡೆದು ಒಂದು ತಿಂಗಳ ನಂತರ ಹಂತಕರ ಸಂಪೂರ್ಣ ಮಾಹಿತಿ ಹೊರಹಾಕಲಾಗಿದೆ. ಹಿಂದೆಯೂ ಹಲವು ರಾಜ್ಯಗಳಲ್ಲಿ ಈ ಖದೀಮರು ಬೀದರ್ ಮಾದರಿಯಲ್ಲಿ ದರೋಡೆ ಎಸಗಿದ್ದರು. ಉತ್ತರ ಪ್ರದೇಶದಲ್ಲಿ 2023ರಲ್ಲಿ ಎಟಿಎಂ ವಾಹನದಲ್ಲಿ ಹಣ ದರೋಡೆ ಮಾಡಿದ್ದರು. ಈಗಾಗಲೇ ಆರೋಪಿಗಳ ಸುಳಿವಿಗಾಗಿ ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳು ಬಹುಮಾನ ಘೋಷಿಸಿದ್ದಾರೆ.
ಈಗ ಕರ್ನಾಟಕ ರಾಜ್ಯದಿಂದಲೂ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಒಟ್ಟು ನಮ್ಮ ದೇಶದ ಮೂರು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿರುವ ದರೋಡೆಕೊರರ ಪತ್ತೆಗೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ ನೆರವು ಕೋರಿದ್ದು, ಅವರ ಸುಳಿವು ಕೊಟ್ಟವರಿಗೆ ಬಹುಮಾನ ಕೊಡುವುದಕ್ಕೆ ಮುಂದಾಗಿದೆ.
ಕಳೆದ ತಿಂಗಳು ಜ.16ರಂದು ಎಟಿಎಂ ಒಂದಕ್ಕೆ ಹಣ ತುಂಬಿಸಲು ಖಾಸಗಿ ಏಜೆನ್ಸಿಯ ವಾಹನವೊಂದು ಬ್ಯಾಂಕ್ ಎಟಿಎಂ ಮುಂದೆ ನಿಂತುಕೊಂಡಿತ್ತು. ಆಗ ಸೆಕ್ಯೂರಿಟಿ ಸಿಬ್ಬಂದಿ ಸುತ್ತಲೂ ನೋಡಿ ವಾಹನದ ಒಳಗಿದ್ದ ಹಣದ ಪೆಟ್ಟಿಗೆಯನ್ನು ಹಿಡಿದು ಎಟಿಎಂ ಒಳಗೆ ಹೋಗುವಾಗ ಸ್ಥಳದಲ್ಲಯೇ ಕಾಯುತ್ತಿದ್ದ ಹಂತಕರು ಬಂದೂಕು ಹಿಡಿದು ಸ್ಥಳಕ್ಕೆ ಬಂದಿದ್ದಾರೆ. ಪೆಟ್ಟಿಗೆ ಕಸಿದುಕೊಳ್ಳಲು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಆಗ ಹಾಡ ಹಣ ತಂದ ಸಿಬ್ಬಂದಿಯಿಂದ ವಿರೋಧ ಉಂಟಾದಾಗ ಸೆಕ್ಯೂರಿಟಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಇನ್ನೊಬ್ಬನ ಮೇಲೂ ಗುಂಡು ಹಾರಿಸಿದ್ದು, ನಂತರ ಹಣದ ಪೆಟ್ಟಿಗೆಯನ್ನು ಹೊತ್ತುಕೊಂಡು ಬೈಕ್‌ನಲ್ಲಿ ಇಟ್ಟುಕೊಂಡು ಪರಾರಿ ಆಗಿದ್ದಾರೆ. ನಂತರ ಇಲ್ಲಿಂದ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಬೇರೆಡೆಗೆ ಪರಾರಿ ಆಗಿದ್ದಾರೆ. ಇದೀಗ ಒಬ್ಬರ ಸುಳಿವು ಸಿಗದೇ ಪೊಲೀಸರು ಸುಳಿು ಕೊಟ್ಟವರಗೆ 5 ಲಕ್ಷ ರೂ. ಹ ನೀಡುವುದಕ್ಕೆ ಮುಂದಾಗದೆ.
