ಮಂಗಳೂರು : ಹಲವು ದಿನಗಳಿಂದ ಬಿಸಿಗಾಳಿ, ವಿಪರೀತ ಸೆಕೆಯಿಂದ ಬಳಲಿದ್ದ ದಕ್ಷಿಣ ಕನ್ನಡ ಜನರಿಗೆ ಮಳೆಯಿಂದ ಕೊಂಚ ರಿಲೀಫ್ ಆಗಿದೆ.
ದಕ್ಷಿಣ ಕನ್ನಡ ಭಾಗದ ಕೂಳೂರು, ಸುರತ್ಕಲ್, ಕೊಟ್ಟಾರ, ಬಜಪೆ ಹಾಗು ಇನ್ನಿತರ ಪರಿಸರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ ಎಂದು ವರದಿಯಾಗಿದೆ.
ಸುಳ್ಯ, ಪುತ್ತೂರು, ಕಬಕ, ಉಪ್ಪಿನಂಗಡಿ ಭಾಗದಲ್ಲೂ ಕೂಡ ವರುಣನ ಸಿಂಚನವಾಗಿದೆ ಎಂದು ತಿಳಿದು ಬಂದಿದೆ.