ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಆಶ್ರಯದಲ್ಲಿ, ಫ್ರೆಂಡ್ಸ್ ಕೋಡಿಕೆರೆ (ರಿ) ಕೋಡಿಕೆರೆ ಸಹಕಾರದೊಂದಿಗೆ ಶ್ರೀ ಸತ್ಯಸಾಯಿ ಬಾಳವಿಕಾಸ ಕೇಂದ್ರ ಮಂಗಳಾದೇವಿ ಇದರ ಸಹಯೋಗದೊಂದಿಗೆ, ಪೆರ್ಮುದೆ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಯೆನಪೋಯ ದಂತ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರ ತಂಡದಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಗಣ್ಯರ ಮತ್ತು ಊರಿನವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇದರ ಸಂಚಾಲಕರಾದ ಸುದೇಶ್ ಬೈಂದೂರು ವಹಿಸಿದರು. ಮತ್ತು ಶ್ರೀಶ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಉದಯ ಶಾಸ್ತ್ರಿ,
ಶ್ರೀಶ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಪ್ರಸನ್ನ ಕುಮಾರ್, ಮಂಜಣ್ಣ ಸೇವಾ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷರಾದ ಮನೋಜ್ ಕೋಡಿಕೆರೆ, ಪೆರ್ಮುದೆ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥರು ಶ್ರೀ ರಮೇಶ್ ರಾವ್, ಫ್ರೆಂಡ್ಸ್ ಕೋಡಿಕೆರೆ (ರಿ) ಕೋಡಿಕೆರೆ ಅಧ್ಯಕ್ಷರಾದ ದೇವದಾಸ್ ಕೋಡಿಕೆರೆ, ಶಾರದಾ ಮಾತೃ ಬಳಗದ ಅಧ್ಯಕ್ಷರಾದ ಮಾಲತಿ, ಕೆ.ಎಂ.ಸಿ. ಆಸ್ಪತ್ರೆಯ ವೈದ್ಯೆ ಡಾಕ್ಟರ್ ಪ್ರಕೃತಿ, ಯನಪೋಯ ಆಸ್ಪತ್ರೆಯ ವೈದ್ಯೆ ಡಾಕ್ಟರ್ ಅಪೂರ್ವ ಕೋಟ್ಯಾನ್ ವೇದಿಕೆ ಹಂಚಿಕೊಂಡರು.
ಈ ವೈದ್ಯಕೀಯ ತಪಾಸಣೆಯಲ್ಲಿ ಒಟ್ಟಾಗಿ 300 ಕ್ಕೂ ಅಧಿಕ ಜನ ಬಂದು ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ತಪಾಸಣೆ ನಡೆಸಿದರು ಮತ್ತು ಫ್ರೆಂಡ್ಸ್ ಕೋಡಿಕೆರೆ (ರಿ) ಕೋಡಿಕೆರೆ ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಫ್ರೆಂಡ್ಸ್ ಕೋಡಿಕೆರೆ (ರಿ) ಕೋಡಿಕೆರೆ ಇದರ ಅಧ್ಯಕ್ಷರು, ಸದಸ್ಯರು, ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.