ಮಂಗಳೂರು… ಅದೊಂದು ಪ್ರಕೃತಿ ದೇವಿ ಮಡಿಲಲ್ಲಿ, ಅದೆಷ್ಟೋ ಉದ್ಯೋಗ ಹರಸಿ ಬಂದವರಿಗೆ ತವರು ತಾಣ ಆಗಿಕೊಂಡು ವಿಶಾಲವಾಗಿ, ದೇಶದಲ್ಲೇ ಮಾದರಿ ಮಂಗಳೂರು ಎಂಬಂತೆ ಮಾದರಿಯೆತ್ತ ಊರು. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಸರ್ವರಿಗೂ ನೆಲೆಯಾಗಲು ತಂಗುದಾಣ ಮಂಗಳೂರು.
ಕಡಲು ಗಮನಿಸಿದರೆ, ಇಡೀ ಊರಿಗೆ ಹಬ್ಬ ಎನ್ನುವಷ್ಟು ಮೀನುಗಳನ್ನು ನೀಡುವ ಬಂದರು. ಬೈಕಂಪಾಡಿ, ಗಂಜಿಮಠ ಉದ್ಯಮ ನೀಡುವ ಕೈಗಾರಿಕೋದ್ಯಮಗಳ ಬೀಡು. ಸುರತ್ಕಲ್ ಕಡೆ ಕಣ್ಣು ಹಾಯಿಸಿದರೆ, ಪ್ರತಿಷ್ಠಿತ ಕೇಂದ್ರ ಸರ್ಕಾರದ ಸುಪರ್ದಿಗೆ ಒಳಪಡುವ ಎಮ್.ಆರ್.ಪಿ.ಎಲ್., ಓ.ಎಂ.ಪಿ.ಎಲ್. ಸಂಸ್ಥೆಯ ಬಹುದೊಡ್ಡ ಕೈಗಾರಿಕೆ. ಹೀಗೆ ಒಂದಲ್ಲಾ ಎರಡಲ್ಲಾ ಹೇಳ ಹೊರಟರೆ ಮಂಗಳೂರಿನ ಸವ್ಯಸಾಚಿ ಸೌಂದರ್ಯ ಹೊಗಳಿದಷ್ಟು ಸಾಲದು.
ಹೀಗಿರುವ ಮಂಗಳೂರಿನ, ಸುರತ್ಕಲ್ ನಲ್ಲಿ ಆಟೋ ರಿಕ್ಷಾ ಚಾಲಕರ, ಸುರತ್ಕಲ್ ರೈಲ್ವೆ ಸ್ಟೇಷನ್ ಬಳಿಯ ದಂಧೆಯ ಬಗೆಗಿನ ಕರಾಳ ಮುಖ ಇಲ್ಲಿದೆ ನೋಡಿ.
ಈ ವರದಿ ಬರೆಯುತ್ತಿರುವ ಮುಖ್ಯ ಉದ್ದೇಶ ಒಂದೇ…ಆಟೋ ರಿಕ್ಷಾ ಚಾಲಕರು ಎಲ್ಲರೂ ಬಡವರೇ, ಮಧ್ಯಮ ವರ್ಗದ ಜನರೆ. ಆದರೆ ಅದೇ ಮಧ್ಯಮ ವರ್ಗದ ಆಟೋ ಚಾಲಕರು, ಎಲ್ಲೋ ಒಂದು ಕಡೆಯಿಂದ ತನ್ನ ಕೆಲಸ ಮುಗಿಸಿಕೊಂಡು ರೈಲ್ ನಲ್ಲಿ ಹೊರಟು, ರಾತ್ರಿ 2 ಗಂಟೆಯಿಂದ 5 ಗಂಟೆಯ ಒಳಗಾಗಿ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು, ಒಮ್ಮೆ ತನ್ನ ಮನೆ ಸೇರಿಕೊಳ್ಳುತ್ತೇನೆ ಎಂದು ಹೊರಟ ಪ್ರಯಾಣಿಕ ಸುಸ್ತಾಗಿ ಆ ನಿದ್ದೆಗಣ್ಣಿನಲ್ಲಿ ಬಂದು ಆಟೋ ರಿಕ್ಷಾ ಚಾಲಕರ ಬಳಿ ತನ್ನ ಮನೆಗೆ ಬಿಡಲು ಎಷ್ಟು ಹಣ ಎಂದು ಕೇಳುವಾಗ, ಆಟೋ ರಿಕ್ಷಾ ಮಾಲಕರು ಬೇಡಿಕೆಯಿಡುವ ಬಾಡಿಗೆ ಎಂತವನನ್ನು ದಂಗಾಗಿಸಿ ಕೊನೆಗೆ ಅದೆಷ್ಟೋ ದೂರ ನಡೆದುಕೊಂಡು ಹೋಗುವ ದುಸ್ಥಿತಿ ಎದುರಾಗಿರುವುದು ಸುರತ್ಕಲ್ ರೈಲ್ವೇ ಸ್ಟೇಷನ್ ನಲ್ಲಿ ಎನ್ನುವುದು ವಿಷಾದನೀಯ.
ಹೌದು…. ಇದಕ್ಕೆ ಸ್ಪಷ್ಟ ವಿಡಿಯೋ ಸಮೇತ ಉದಾಹರಣೆ ನಮ್ಮ ಮಾಧ್ಯಮಕ್ಕೆ ದೊರೆತಿದೆ. ಸುರತ್ಕಲ್ ರೈಲ್ವೇ ನಿಲ್ದಾಣದಿಂದ 62ನೇ ತೋಕೂರು ಕಡೆ ಸಾಗಲು ಇರುವುದು ಕೇವಲ 5.1 ಕಿಲೋ ಮೀಟರ್ ದೂರ. ಆಟೋ ಮೀಟರ್ ಹಾಕಿದರೆ 100 ರೂಪಾಯಿ ಕೂಡ ಬರಲ್ಲ. ಆದರೆ ಸುರತ್ಕಲ್ ರೈಲ್ವೇ ಸ್ಟೇಷನ್ ನಲ್ಲಿ ಆಟೋ ಚಾಲಕರು ಕೇಳುವ ಹಣ 280,250,200. ಹಾಗದರೆ ಬಡಪಾಯಿ ಜನರು ಇದನ್ನು ಹೇಗೆ ಅರಗಿಸಿಕೊಳ್ಳಬಹುದು ಹೇಳಿ.
ಕಿಲೋ ಮೀಟರ್ ಗಟ್ಟಲೆ ದೂರಕ್ಕೆ ರಾತ್ರಿ ಸಮಯದಲ್ಲಿ ಸಾಗಲಿರುವ ಅಸಹಾಯಕ ರೈಲ್ವೇ ಪ್ರಯಾಣಿಕರು ಬರೋದನ್ನೇ ಕಾದು ಕುಳಿತ ಕೆಲವು ಹಣದ ದುರಾಸೆಯ ಆಟೋ ಚಾಲಕರು 280,250,230 ಕೊಡಿ ಎನ್ನುತ್ತಾರೆ ಅಲ್ಲದೆ ಕೊನೆಗೆ 200 ಕೊಡಿ ಎನ್ನುತ್ತಾರೆ. ಮೀಟರ್ ಹಾಕಿದರೆ, 100 ರೂಪಾಯಿ ಆಗೋಲ್ಲ ಅಂದ ಮೇಲೆ ಇದ್ಯಾಕೆ ಸ್ವಾಮಿ ಬಡವರ ಬಳಿ ಈ ರೀತಿ ಕೊಳ್ಳೆ ಹೊಡೆಯುತ್ತಿದ್ದಾರೆ..?
ಕೆಲ ಬುದ್ಧಿ ಜೀವಿಗಳ ಪ್ರಕಾರ ರಾತ್ರಿ ನಿದ್ದೆ ಬಿಟ್ಟು ಆಟೋದಲ್ಲಿ ದುಡಿಯುತ್ತಾರೆ ಎನ್ನುತ್ತಾರೆ, ಹಾಗಿದ್ದರೆ ಅಲ್ಲಿ ರೈಲ್ ನಿಂದ ಇಳಿದು ಬರುವಾತ ಕೂಡ ಕೆಲಸ ನಿಮಿತ್ತವೇ, ರಾತ್ರಿ ನಿದ್ದೆ ಬಿಟ್ಟು ಶ್ರಮಿಸಿ ಬಂದಿರುತ್ತಾನೆ ಅಲ್ಲವೇ…
ಆಟೋ ಚಾಲಕರು ರಾತ್ರಿ ನಿದ್ದೆ ಬಿಟ್ಟು ಕಾಯುತ್ತಾ ದುಡಿಯುತ್ತಾರೆ ಹೌದು..! ಆ ಶ್ರಮಕ್ಕಾಗಿ ಮೀಟರ್ ಮೇಲೆ ಅರ್ಧ ರೇಟ್ ತಗೊಳೋದು ಮಾನವೀಯತೆ ದೃಷ್ಟಿಯಲ್ಲಿ ಇರಲಿ ಬಿಡಿ ಎನ್ನಬಹುದು. ಆದರೆ, ಅದಕ್ಕಿಂತ ಮಿಗಿಲಾಗಿ ಇವರ ರೇಟ್ ಒನ್ ಟೂ ಡಬಲ್, ತ್ರಿಬಲ್..!
100 ರೂಪಾಯಿ ಮೀಟರ್ ಚಾರ್ಜ್ ಆಗುವಲ್ಲಿ 280,250,230 ಕೊಡಿ ಎನ್ನುವುದು ಎಷ್ಟು ನ್ಯಾಯ..?
ಹಾಗದರೆ ಎತ್ತೆಡೆ ಸಾಗುತ್ತಿದೆ ನಮ್ಮ ಬುದ್ಧಿವಂತರ ಜಿಲ್ಲೆ ಮಂಗಳೂರು.?
ಇದರ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆ ಗುಪ್ತ ಕಾರ್ಯಾಚರಣೆ ನಡೆಸಿ, ಸುರತ್ಕಲ್ ಪೊಲೀಸ್ ಠಾಣೆ ಇತರರಿಗೆ ಮಾದರಿಯಾಗಬೇಕು ಎಂಬುದು ನಮ್ಮ ಮಾಧ್ಯಮದ ಮೂಲಕ ವಿನಂತಿ. ನಮ್ಮ ಈ ವರದಿಯ ನಂತರವು ಸುರತ್ಕಲ್ ನಲ್ಲಿ ಪ್ರೀ ಪೈಡ್ ಆಟೋ ಚಾಲ್ತಿಯಲ್ಲಿ ಬರದಿದ್ದರೆ, ಆ ಆಟೋ ಚಾಲಕರು ರೇಟ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣ ಬಂದರೆ ಅದೆಷ್ಟೋ ಕೆಲ ನಿಷ್ಠಾವಂತ ಆಟೋ ಚಾಲಕರ ಬಗ್ಗೆ ನಮ್ಮ ಜನರಿಗೆ ಇರುವ ಮಾನವೀಯತೆ ಕಡಿಮೆ ಆಗಬಹುದು ಎಂಬ ಉದ್ದೇಶದಿಂದ ವೈರಲ್ ಮಾಡುತ್ತಿಲ್ಲ ಅಷ್ಟೇ. ನಮ್ಮ ಮಾಧ್ಯಮದ ಮೂಲಕ ಎಲ್ಲಾ ಸಂಭಂದಪಟ್ಟ ಇಲಾಖೆಗಳ ಬಳಿ ಒಂದೇ ಮನವಿ ಏನೆಂದರೆ ಸುರತ್ಕಲ್ ರೈಲ್ವೇ ನಿಲ್ದಾಣದಲ್ಲಿ ಆದಷ್ಟು ಬೇಗ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಜಾರಿಗೆ ತಂದು ರಾತ್ರಿ ಬರುವ ರೈಲ್ವೇ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಬೇಕಾಗಿ ವಿನಂತಿ.
ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ನ್ಯಾಯಾಧೀಶ ಒಬ್ಬರು ಕಾರ್ಯನಿಮಿತ್ತ ಮಧ್ಯರಾತ್ರಿ ವೇಳೆಯಲ್ಲಿ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಇಳಿದು ಆಟೋ ಬಳಿ ಬಂದು, ಆಟೋ ಚಾಲಕನ ಬಳಿ ಒಂದು ನಿರ್ದಿಷ್ಟ ಜಾಗಕ್ಕೆ ಹೋಗಲು ಎಸ್ಟಾಗುತ್ತದೆ ಎಂದು ಕೇಳಿದಾಗ, ಅಲ್ಲಿಗೆ ಮೀಟರ್ ಹಾಕಿದರೆ 50 ರೂಪಾಯಿ ಆಗುವಲ್ಲಿ ಆ ಆಟೋ ಚಾಲಕ ಒಂದೇ ಬಾರಿಗೆ 200 ರೂಪಾಯಿ ಆಗುತ್ತೆ ಅಂತ ಹೇಳಿದ್ದ. ಈತನ ಹಣದ ದುರಾಸೆ ಅಂದೇ ನಿಲ್ಲಿಸಬೇಕು ಎಂದು ಪಣತೊಟ್ಟ ಜಡ್ಜ್ ಸಾಹೇಬರು, ಆಯ್ತು 200 ಕೊಡುತ್ತೇನೆ ಆಟೋ ತೆಗಿ ಎನ್ನುತ್ತಾರೆ. ಹೀಗೆ ದಾರಿ ಮಧ್ಯೆ ಬರುವಾಗ ಸ್ವಲ್ಪ ಪೋಲೀಸ್ ಠಾಣೆಯಲ್ಲಿ ಫೈಲ್ ಒಂದು ಕಲೆಕ್ಟ್ ಮಾಡಲು ಇದೆ, ಸ್ವಲ್ಪ ಪೋಲೀಸ್ ಸ್ಟೇಷನ್ ಬಳಿ ಆಟೋ ನಿಲ್ಲಿಸು ಎನ್ನುತ್ತಾರೆ. ಆಟೋ ರಿಕ್ಷಾದಿಂದ ಇಳಿದು ಹೊರಟ ನ್ಯಾಯಾಧೀಶರು ಪೊಲೀಸ್ ಠಾಣೆ ಒಳ ಹೋಗಿ ಆ ಆಟೋ ಚಾಲಕ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಕಂಪ್ಲೇಂಟ್ ದಾಖಲಿಸಿ ಆತನನ್ನು ಬಂಧಿಸಿದಲ್ಲದೆ, ಆತನ ಆಟೋ ರಿಕ್ಷಾವನ್ನು ಸೀಜ್ ಮಾಡಿದ್ದರು. ಅದಾದ ನಂತರ ಮಾನ್ಯ ಶಿವಮೊಗ್ಗ ಪೊಲೀಸ್ ಇಲಾಖೆ, ಶಿವಮೊಗ್ಗ ನಗರದಲ್ಲಿ ಮೀಟರ್ ಹಾಕದೆ ಓಡಾಡುತ್ತಿದ್ದ ಎಲ್ಲಾ ಆಟೋ ರಿಕ್ಷಾಗಳನ್ನು ತಪಾಸಣೆ ನಡೆಸಿ, ಮೀಟರ್ ಹಾಕದೆ ಆಟೋ ಓಡಿಸುವಂತೆ ಇಲ್ಲವೆಂದು ಕಡಕ್ ಆಗಿ ವಾರ್ನ್ ಮಾಡಿದ್ದರು. ಆ ಮೇಲಿಂದ ಇಲ್ಲಿಯವರೆಗೂ ಶಿವಮೊಗ್ಗ ಆಟೋ ಚಾಲಕರು ಮೀಟರ್ ಹಾಕಿಕೊಂಡೆ ಆಟೋ ಚಲಾಯಿಸುವಂತೆ ಪೊಲೀಸ್ ಇಲಾಖೆ ದಕ್ಷ ಕಾರ್ಯಾಚರಣೆ ನಡೆಸಿತ್ತು.
ಸುರತ್ಕಲ್ ಭಾಗದಲ್ಲೂ ಕೂಡ ಇದೇ ರೀತಿಯ ಒಂದು ಗುಪ್ತ ಕಾರ್ಯಾಚರಣೆ ನಡೆಸಿ, ಸುರತ್ಕಲ್ ರೈಲ್ವೇ ಸ್ಟೇಷನ್ ನಲ್ಲಿ ಅಮಾಯಕರ ಬಳಿ ರಾತ್ರಿ ಹಣ ಕೀಳುವ ಇಂತಹ ಕೆಲವು ಹಣದ ಆಸೆಯ ಆಟೋ ಚಾಲಕರಿಗೆ ಕಡಿವಾಣ ಹಾಕಬೇಕಾಗಿದೆ.
ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ನಡೆದ ಅಂದಿನ ಆಟೋ ಚಾಲಕರನ್ನು ಮಟ್ಟ ಹಾಕಿದ ನ್ಯಾಯಾಧೀಶರ ರೀತಿಯಲ್ಲೇ ಸುರತ್ಕಲ್ ಠಾಣಾ ಪೊಲೀಸರು ಇಂತಹ ಅನ್ಯಾಯಕ್ಕೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಕೊಡಬೇಕಾಗಿದೆ.