Mangalore and Udupi news
ದಕ್ಷಿಣ ಕನ್ನಡಮಂಗಳೂರು

ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರಿಂದ “ಭಕ್ತಿಯ ಯಾತ್ರೆ” ಪಾದಯಾತ್ರೆ ಮೂಲಕ ಪಿಲಿಚಾಮುಂಡಿ ದೈವದ ಬಳಿ ಪ್ರಾರ್ಥನೆ.


ಎಂ.ಆರ್.ಪಿ.ಎಲ್. ಸಂಸ್ಥೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಿಗಬೇಕಾದ ನೈಜ ಸವಲತ್ತುಗಳ ಬಗ್ಗೆ, ಜಿಲ್ಲೆಯ ಸಂಸದರ ಉಪಸ್ಥಿತಿಯಲ್ಲಿ, ಅಪರ ಜಿಲ್ಲಾಧಿಕಾರಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಹಾಗೂ ಕರ್ಮಚಾರಿ ಸಂಘದ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಗುತ್ತಿಗೆ ಕಾರ್ಮಿಕರಿಗೆ ವಿಮೆ ಸೌಲಭ್ಯ, ಆರೋಗ್ಯ ಭದ್ರತೆ ಹಾಗೂ ವಿಶೇಷ ಭತ್ಯೆ ಮುಂತಾದ ಕಾರ್ಮಿಕರ ಬೇಡಿಕೆಗಳಿಗೆ ಎಂ.ಆರ್.ಪಿ.ಎಲ್. ಸಂಸ್ಥೆ ಲಿಖಿತವಾಗಿ ಉತ್ತರ ನೀಡಬೇಕೆಂದು ಏಪ್ರಿಲ್ 2 ರ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಿದ್ದರು.

ಆದರೆ, ಈ ಆಗ್ರಹಕ್ಕೆ ಎಂ.ಆರ್.ಪಿ.ಎಲ್. ಸಂಸ್ಥೆ ಯಾವುದೇ ಉತ್ತರ ನೀಡದ ಪರಿಣಾಮವಾಗಿ ಎಲ್ಲಾ ಗುತ್ತಿಗೆ ಕಾರ್ಮಿಕರು ಸೇರಿಕೊಂಡು ಎಂ.ಆರ್.ಪಿ.ಎಲ್. ಮುಖ್ಯ ಗೇಟ್ ನ ಗಣಪತಿ ದೇವಸ್ಥಾನದಿಂದ ಹೊರಟು ಕಾರಣಿಕ ಕ್ಷೇತ್ರ ಪೆರ್ಮುದೆ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಇಂದು ಮುಂಜಾನೆ ಎಲ್ಲಾ ಗುತ್ತಿಗೆ ಕಾರ್ಮಿಕರ ಸಹಭಾಗಿತ್ವದಲ್ಲಿ, ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರ ಶಕ್ತಿಯ ಪ್ರಾಪ್ತಿಗಾಗಿ “ಭಕ್ತಿಯ ಯಾತ್ರೆ” ಎಂಬ ಸಂಕಲ್ಪದೊಂದಿಗೆ ಪಾದಯಾತ್ರೆ ಮೂಲಕ ಪಿಲಿಚಾಮುಂಡಿ ದೈವದ ಬಳಿ ಭಕ್ತಿಯಿಂದ ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ಗುತ್ತಿಗೆ ಕಾರ್ಮಿಕರ ಪ್ರಮುಖರು, ಗುತ್ತಿಗೆ ಕಾರ್ಮಿಕರಿಗೆ ಬೇಡಿಕೆ ಇರುವಂತಹ ಸೌಲಭ್ಯ ಕೊಡಲು ಎಂ.ಆರ್.ಪಿ.ಎಲ್. ಸಂಸ್ಥೆ ಮುಂದಾಗಿದ್ದರೂ, ಅದಕ್ಕೆ ಕೆಲ ಜನರು ತಡೆ ಮಾಡುತ್ತಿರುವುದು ಗೋಚರಿಸಿದೆ, ಅಂತಹ ಜನರ ಅಡ್ಡಿ ಇನ್ನು ಮುಂದೆ ಯಾವುದೇ ರೀತಿಯ ಅಡ್ಡಿ ಪಡಿಸದಂತೆ ದೈವ ಪಿಲಿಚಾಮುಂಡಿ ನೋಡಿಕೊಳ್ಳಬೇಕು, ಮತ್ತು ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನದ ಗುತ್ತಿನಾರ್ ಗುರುರಾಜ್ ಮಾಡ ಅವರು ಎಲ್ಲಾ ಕಾರ್ಮಿಕರ ಈಡೇರಿಕೆಗಳು ಆದಷ್ಟು ಬೇಗ ಈಡೇರುವಂತೆ ತಾಯಿ ಪಿಲಿಚಾಮುಂಡಿ ದೈವದ ಬಳಿ ಪ್ರಾರ್ಥಿಸಿದರು.

Related posts

Leave a Comment