ಕರ್ನಾಟಕ ಸರ್ಕಾರವು 2024 ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ 197 ಪೊಲೀಸ್ ಅಧಿಕಾರಿಗಳನ್ನು ಘೋಷಿಸಿದ್ದು, ಅದರಲ್ಲಿ ಮಂಗಳೂರು ಸುತ್ತ ಮುತ್ತಲಿನ ಪೊಲೀಸ್ ಅಧಿಕಾರಿಗಳನ್ನು ಅವರ ಅಸಾಧಾರಣ ಸೇವೆಗಾಗಿ ಅವರನ್ನು ಗುರುತಿಸಿ ಮುಖ್ಯಮಂತ್ರಿ ಪದಕ ನೀಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ, ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ, ಮತ್ತು ಮಂಗಳೂರು ಉಪವಿಭಾಗದ ಎಸಿಪಿ ಧನ್ಯಾ ನಾಯಕ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ, ಉಳ್ಳಾಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಮತ್ತು ಪಿಎಸ್‌ಐ ಸಂತೋಷ್ ಕುಮಾರ್ ಡಿ ಅವರನ್ನು ಗುರುತಿಸಲಾಗಿದೆ.
ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್‌ಐ ರಾಘವೇಂದ್ರ ಮಂಜುನಾಥ್ ನಾಯಕ್,
ಹೆಡ್ ಕಾನ್ ಸ್ಟೇಬಲ್ ಅಣ್ಣಪ್ಪ ವಂಡ್ಸೆ ಮತ್ತು ಹೆಡ್ ಕಾನ್ ಸ್ಟೇಬಲ್ ಉಮೇಶ್ ಕೊಟ್ಟಾರಿ ಹಾಗೂ ಕಂಕನಾಡಿ ಪೊಲೀಸ್ ಠಾಣಾಧಿಕಾರಿ ರೇಜಿ ವಿ ಎಂ ಆಯ್ಕೆ ಮಾಡಲಾಗಿದೆ.
ಮಂಗಳೂರಿನ ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಅಧಿಕಾರಿಗಳಾದ ಶೀನಪ್ಪ, ರಿತೇಶ್, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ್ ಕೆ, ವಿಜಯ ಶೆಟ್ಟಿ, ಶ್ರೀಧರ್ ವಿ, ಪ್ರಕಾಶ್ ಎಸ್, ಅಭಿಷೇಕ್ ಎಆರ್, ಅಂಜನಪ್ಪ ಎಚ್, ಭೀಮಪ್ಪ ಉಪ್ಪಾರ ಮತ್ತು ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಗುವುದು.
ಕಾನೂನು ಜಾರಿ, ಸಾರ್ವಜನಿಕ ಸುರಕ್ಷತೆ ಮತ್ತು ಪ್ರದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕವನ್ನು ನೀಡಲಾಗುತ್ತದೆ ಈ ಬಾರಿ ನಮ್ಮ ಮಂಗಳೂರಿನ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು ಆಯ್ಕೆಯಾಗಿರುವುದು ನಮ್ಮ ಮಂಗಳೂರಿಗೆ ಹೆಮ್ಮೆಯ ವಿಚಾರ. ನಮ್ಮ ಮಾಧ್ಯಮ ಕಡೆಯಿಂದ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು.