ಸುರತ್ಕಲ್ : ಭಾರತ್ ಮಾತಾ ಪೂಜನ ಸಮಿತಿ ಸುರತ್ಕಲ್ ನಗರದ ವತಿಯಿಂದ ಏಪ್ರಿಲ್ 13 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆಯುವ ಭಾರತಮಾತ ಪೂಜನ ಹಾಗೂ ಮಾತೃ ಸಂಗಮ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಸಮಾರಂಭ ದಿನಾಂಕ 23.03.2025 ನೇ ಭಾನುವಾರ ಕುಳಾಯಿ ಮಹಿಳಾ ಮಂಡಲದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಉದಯನಾರಯಣ, ಯಜ್ನೇಶ್ ಐತಾಳ್, ಪ್ರಮೋದ್, ಭಾಸ್ಕರ್, ಕಾರ್ತಿಕ್ ಪೈ, ಪವಿತ್ರ ನಿರಂಜನ್, ಶ್ವೇತಾ ಪೂಜಾರಿ, ಗಾಯತ್ರಿ ಸಾಲ್ಯಾನ್, ಬೇಬಿ, ರೇವತಿ ನವೀನ್, ಪ್ರಮೀಳಾ ಕೋಟ್ಯಾನ್, ಭವ್ಯ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
