ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವಿನ ಜಗಳ ಬೀದಿಗೆ ಬಂದು ಸಾರ್ವಜನಿಕರು ದಂಗಾಗುವಂತೆ ಮಾಡಿದೆ. ಮಹಿಳೆಯೊಬ್ಬರು ಜನ ಸಂದಣಿ ಇರುವ ನಗರದ ಹೊಸ ಬಸ್ ನಿಲ್ದಾಣದಲ್ಲೇ ಲಾಂಗ್ ಹಿಡಿದು ಓಡಾಡಿ ಅಚ್ಚರಿ ಮೂಡಿಸಿದ್ದಾರೆ.
ಮಹಿಳೆ ಲಾಂಗ್ ಹಿಡಿದು ಓಡಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪತಿ ತಮ್ಮ ವಿರೋಧಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಪತ್ನಿ ಮಚ್ಚು ಹಿಡಿದು ಪತಿಯ ಬೆನ್ನಿಗೆ ನಿಂತಿದ್ದಾಳೆ.. ಸದ್ಯ ಈ ದೃಶ್ಯ ಕಂಡು ಅಲ್ಲಿದ್ದ ಜನ ದಂಗಾಗಿದ್ದಾರೆ. ಇನ್ನು ಈ ಘಟನೆ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ.