ನಿವೃತ್ತ ವಾಯು ಸೇನಾ ಯೋಧ ಭಾರತೀಯ ವಾಯು ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ 1983 ರಲ್ಲಿ ನಿವೃತ್ತಿ ಹೊಂದಿದ ಪದ್ಮನಾಭ ಅವರು ತಮ್ಮ ಜಾಗದಲ್ಲಿದ್ದ ನಾಗಬನವನ್ನ ಅಭಿವೃದ್ಧಿಪಡಿಸಿ ಅದಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಅಡ್ಡಿ ಪಡಿಸುವ ಉದ್ದೇಶದಿಂದ ನಾಗಬನ ದಿಂದ
ಪಕ್ಕದಲ್ಲಿ ಅವರ ಪಟ್ಟಾ ಜಾಗದಲ್ಲಿ ಮೂರು ನಾಲ್ಕು ಮನೆಯವರಿಗೂ ಉಪಯೋಗಕ್ಕಾಗಿ ರಸ್ತೆಯನ್ನು ಕೂಡ ನೀಡಿದ್ದರು ಇವರ ನಾಗಬನದಲ್ಲಿ ಅಭಿವೃದ್ಧಿ ಕಾರ್ಯವನ್ನು ಹಾಗೂ ಇವರ ಜಾಗದಲ್ಲಿ ನಡೆಸಲು
ಉದ್ದೇಶಿಸಿದ್ದ ಅಭಿವೃದ್ಧಿ ಕಾರ್ಯವನ್ನ ತಡೆಯಬೇಕೆನ್ನುವ ದುರುದ್ದೇಶದಿಂದ ರಸ್ತೆ ಹಾಗೂ ಮಾಜಿ ಸೈನಿಕ ಪದ್ಮನಾಭ ಅವರ ಜಾಗಕ್ಕೆ ಜಲ್ಲಿಹಾಗೂ ಮರಮಟ್ಟುಗಳನ್ನು ತಂದು ಹಾಕಿ ತೊಂದರೆ ನೀಡಿರುವುದು ಸುಭಾಸ್ ಹೆಗ್ಡೆಯ ಗೂಂಡಾಗಿರಿಗೆ ಸ್ಪಷ್ಟ ನಿದರ್ಶನವಾಗಿದೆ
ಈ ಹಿಂದೆ ಕೂಡ ಹಣದ ದರ್ಪದಿಂದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಬಡಜನರಿಗೆ ಅನ್ಯಾಯ ಮಾಡಿರುವುದು ಸಾಕಷ್ಟು ನಿದರ್ಶನವಿದೆ ಎನ್ನುತ್ತಾರೆ ಸ್ಥಳೀಯರು
ಬಿಜೆಪಿ ಮುಖಂಡ ಎಂದು ಹೇಳಿಕೊಂಡು ನಾಗದೇವರ ಪೂಜೆ ಹಾಗೂ ನಾಗಬನವನ್ನು ಅಭಿವೃದ್ಧಿ ಪಡಿಸಲು ಆಡ್ಡಿ ಪಡಿಸಿದ್ದು ಎಷ್ಟು ಸರಿಯನ್ನೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಕೂಡಲೆ ಸುಭಾಸ್ ಹೆಗ್ಡೆ ಯನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ ಪ್ರಕರಣದ ಸಾರಾಂಶ
ದೂರುದಾರರಾದ ಪದ್ಮನಾಭ (78) ಇವರ ಬಾಬ್ತು 1.38 ಎಕ್ರೆ ಜಾಗವು ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು
ಸದರಿ ಜಾಗಕ್ಕೆ ದಿನಾಂಕ 18/03/2025 ರಂದು ಬೆಳಿಗ್ಗೆ 11 ಗಂಟೆಗೆ ಪದ್ಮನಾಭ ಅವರು ಹಾಗೂ ಅವರ ಮಗ ಹೋಗಿದ್ದು ಸದರಿ ಸ್ಥಳದಲ್ಲಿ ಪೆರ್ಡೂರಿನ ಸುಭಾಸ್ ಹೆಗ್ಡೆ ರವರು ಅಕ್ರಮವಾಗಿ ಪ್ರವೇಶಿಸಿ ಮರದ ತುಂಡು ಹಾಗೂ ಕಲ್ಲುಗಳನ್ನು ಶೇಖರಿಸಿಟ್ಟಿದ್ದು
ಸದರಿ ಸ್ವತ್ತುಗಳನ್ನು ತೆರವುಗೊಳಿಸುವಂತೆ ಅವರಲ್ಲಿ ವಿನಂತಿಸಿಕೊಂಡಾಗ ಅವರು ದೂರುದಾರರ ಕಾಲರ್ ಪಟ್ಟಿ ಹಿಡಿದು” ಅವ್ಯಾಚ್ಯ ಶಬ್ದದಿಂದ ಬೈದು ಕೈಯಿಂದ ತಳ್ಳಿದ್ದು ಅಲ್ಲದೇ ʼʼನಿನ್ನ ಕೈಕಾಲು ಕಡಿದು ಹಾಕಿ ಕೊಂದು ಜಮೀನಿನಲ್ಲಿ ಹೂತು ಹಾಕುತ್ತೇನೆ ʼʼ ಎಂದುಜೀವ ಬೆರದರಿಕೆ ಹಾಕಿರುತ್ತಾನೆ.
ಈ ಬಗ್ಗೆ ಹಿರಿಯಡ್ಕ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.