ಮುಲ್ಕಿ: ಬಳಕುಂಜ ಕಂಬಳಕ್ಕೆ ಅಂಟಿಕೊಂಡ ಹಲವು ವಿವಾದ.! “ಕಂಬಳದ ಕರೆಯಲ್ಲಿ ನನ್ನ ಜಾಗವಿದೆ. ಈ ಬಾರೀ ಕಂಬಳ ನಡೆಯಲ್ಲ” – ವೀರೇಂದ್ರ ಪೂಂಜ
ಮುಲ್ಕಿ: ಬಳಕುಂಜ ಕಂಬಳ ಸೇವಾ ಸಮಿತಿ, ಕೋಟ್ನಾಯಗುತ್ತು ಇದರ ಆಶ್ರಯದಲ್ಲಿ ನಡೆಯುವ ಕರಿಯ ದೇಸಿಂಗರಾಯ – ಬೊಳಿಯ ದೇಸಿಂಗರಾಯ ಜೋಡುಕರೆ ಕಂಬಳದಲ್ಲಿ ವಿವಾದ ಕೇಳಿಬಂದಿದೆ. ಮಹಿಳಾ ಅಧ್ಯಕ್ಷತೆಯಲ್ಲಿ ನಡೆಯುವ ಕಂಬಳಕ್ಕೆ ವಿವಾದ ಅಂಟಿಕೊಂಡಿದೆ. ಮಹಿಳಾ ನಾಯಕಿಯ ಸರ್ವಾಧಿಕಾರದ ಧೋರಣೆಗಳು ಸೇರಿದಂತೆ ವಿವಿಧ ಆರೋಪಗಳು ಕೇಳಿಬರುತ್ತಿದೆ.
ಕಂಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬಳಕುಂಜೆ ಶ್ರೀ ಧೂಮಾವತಿ ದೈವಸ್ಥಾನದ ಗಡಿ ಪ್ರಧಾನರಾದ ವೀರೇಂದ್ರ ಪೂಂಜ ಅವರು ಈ ಕಂಬಳ ನಡೆಯುವ ಕರೆಯಲ್ಲಿ ನನ್ನ ಜಾಗವಿದೆ ಅಂದಿದ್ದಾರೆ. ಕಂಬಳದ ಕರೆಯಲ್ಲಿ ನನ್ನ ಜಾಗವಿದೆ. ಕಂಬಳ ನಡೆಯುವುದಕ್ಕೆ ತುಂಬಾ ಭಿನ್ನಭಿಪ್ರಾಯವಿದೆ. ಅದನ್ನು ಸರಿಪಡಿಸಿಕೊಂಡರೆ ಮುಂದಿನ ಬಾರಿ ಕಂಬಳ ನಡೆಸಲಾಗುವುದು. ನಾನು ಈಗಾಗಲೇ ಜುಮಾದಿ ಬಂಟನ ಬಳಿ ಪ್ರಾರ್ಥನೆ ಮಾಡಿದ್ದೇನೆ. ದೈವದ ಅಪ್ಪಣೆಯಂತೆ ಮುಂದುವರಿಯುತ್ತೇನೆ ಎಂದಿದ್ದಾರೆ.
ಇನ್ನು ಬಳಕುಂಜ ಕಂಬಳಕ್ಕೆ ಬಿಜೆಪಿ – ಕಾಂಗ್ರೆಸ್ ಅಲ್ಲದೆ ಜನರ ವಿರೋಧವೂ ಇದೆ. ಮಹಿಳಾ ಅಧ್ಯಕ್ಷರ ಬದಲಾವಣೆಯ ಕೂಗು ಕೇಳಿಸಿದೆ. ಕಂಬಳ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾ ಯಶವಂತಶೆಟ್ಟಿ ಅವರನ್ನು ಈ ಸ್ಥಾನದಿಂದ ತೆಗೆದು ಬೇರೆಯವರನ್ನು ಆಯ್ಕೆ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಅದ್ಧೂರಿಯಾಗಿ ನಡೆಯಬೇಕಾಗಿದ್ದ ಕಂಬಳಕ್ಕೆ ಈಗ ಜಾಗ, ಅಧ್ಯಕ್ಷರ ಸರ್ವಾಧಿಕಾರದ ಧೋರಣೆ, ಏಕವ್ಯಕ್ತಿಯ ನಿರ್ಧಾರ ಹೀಗೆ ಹಲವು ವಿವಾದಗಳು ಸುತ್ತಿಕೊಂಡಿದೆ. ಒಟ್ಟಿನಲ್ಲಿ ತುಳುನಾಡಿನ ಸಂಪ್ರದಾಯಕ್ಕೆ ರಾಜಕೀಯ ಸೇರಿದಂತೆ ವೈಯಕ್ತಿಕ ವಿರೋಧಗಳು ಕೇಳಿಬಂದಿದೆ.