ಮುಗ್ಧ ಮಕ್ಕಳಲ್ಲಿ ದ್ವೇಷ ಮತ್ತು ಮೂಲಭೂತವಾದವನ್ನು ತುಂಬುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಜನರನ್ನು ಗಾಬರಿಗೊಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಕೆ-47 ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿರುವ ಬಾಲಕಿಯೊಬ್ಬಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಡಿಯೋ ಯಾವಾಗ ಬಿಡುಗಡೆಯಾಗಿದ್ದು, ಎಲ್ಲಿಯದ್ದು ಎನ್ನುವುದು ಸ್ಪಷ್ಟವಾಗಿಲ್ಲ.
ವೈರಲ್ ಆಗಿರುವ ವಿಡಿಯೋದಲ್ಲಿ, ಹುಡುಗಿ ಆಕ್ರಮಣಕಾರಿ ರೈಫಲ್ ಎಕೆ 47 ಹಿಡಿದುಕೊಂಡು ಆತಂಕಕಾರಿ ಸಂದೇಶವನ್ನು ನೀಡುತ್ತಿರುವುದನ್ನು ಕಾಣಬಹುದಾಗಿದೆ.
“ಮೋದಿ.. ನೀವು ಏನೇ ಆಗಿದ್ದರೂ, ಮೂರ್ಖ ವ್ಯಕ್ತಿ, ನೀವು ನಮ್ಮ ದೇಶದ ತಾಯಿ, ತಂದೆ ಮತ್ತು ಮಕ್ಕಳನ್ನು ಹತ್ಯೆಗೈದರೆ, ನಾನು ನಿಮ್ಮನ್ನು
ಕೊಲ್ಲುತ್ತೇನೆ, ಮತ್ತು ನೀವು ನೋಡುತ್ತೀರಿ… ನನ್ನ ಬಳಿ ಬಹಳಷ್ಟು ಗುಂಡುಗಳಿವೆ. ನಿಮ್ಮನ್ನು ಎರಡೇ ಹೊಡೆತಗಳಲ್ಲಿ ಕೊಲ್ಲುತ್ತೇನೆ. ನೀವು ಎಂದಿಗೂ ಜೀವಂತವಾಗಿರುವುದಿಲ್ಲ, ವೈದ್ಯರೂ ನಿಮ್ಮನ್ನು ಸರಿಪಡಿಸಲಾಗುವುದಿಲ್ಲ. ನೀವು ಶಾಶ್ವತವಾಗಿ ನೆಲ ಕಚ್ಚುತ್ತೀರಿ. ಅಲ್ಲಾಹೂ ನಿಮ್ಮ ಬಗ್ಗೆ ಸಂತೋಷಪಡುವುದಿಲ್ಲ” ಎಂದು ಹೇಳಿಕೊಂಡಿದ್ದಾಳೆ.