ಸುರತ್ಕಲ್ ಕುಳಾಯಿ ಬಳಿ ನೂತನವಾಗಿ ನಿರ್ಮಾಣವಾಗಲಿರುವ ಶಿಶುಮಂದಿರ ಕಟ್ಟಡಕ್ಕೆ ದಾನಿಗಳು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿದ್ದಾರೆ.
ಶತಾಯುಷಿ ಗಂಗಮ್ಮಜ್ಜಿ ಅವರ 103 ನೇ ಜನ್ಮದಿನದ ಸುಸಂಧರ್ಭದಲ್ಲಿ ಅವರ ಮಕ್ಕಳಾದ ಶ್ರೀಮತಿ ತುಳಸಿ ಉಪಾಧ್ಯಾಯ ಹಾಗೂ ಶ್ರೀಮತಿ ಜಯಲಕ್ಷ್ಮಿ ಸುರೇಶ್ ಒಂದು ಲಕ್ಷ ರೂಪಾಯಿ ನೂತನ ಶಿಶುಮಂದಿರ ಕಟ್ಟಡಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಶತಾಯುಷಿ ಗಂಗಮ್ಮಜ್ಜಿ ಶುಭಹಾರೈಸಿ ನೂತನ ಕಟ್ಟಡವು ಶೀಘ್ರವಾಗಿ ನೆರವೇರಿ ಹಿಂದೂ ಸಮಾಜಕ್ಕೆ ಅರ್ಪಿತವಾಗಲಿ ಎಂದು ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ ಕೇಶವ ಶಿಶುಮಂದಿರ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಉದಯನಾರಾಯಣ,ಯಜ್ನೇಶ ಐತಾಳ,ಕಾರ್ತಿಕ್ ಪೈ, ಯೋಗೀಶ್ ಸನಿಲ್, ಪ್ರಮೋದ್ ಹಾಗೂ ನೂತನ ಕಟ್ಟಡ ನಿರ್ಮಾಣ ಸಮಿತಿಯ ಜಯಪ್ರಕಾಶ್ ಸೂರಿಂಜೆ, ವರುಣ್ ಚೌಟ, ನವೀನ್ ಬರ್ಕೆ, ಚಂದ್ರಶೇಖರ್ MCC ಮುಂತಾದವರು ಉಪಸ್ಥಿತರಿದ್ದರು.
ಮತ್ತು ಶ್ರೀ ಸ್ಪೂರ್ತಿ ಧ್ವನಿ ಮಹಿಳಾ ಮತ್ತು ಯುವ ಸೇವಾ ಟ್ರಸ್ಟ್ ನ ವತಿಯಿಂದ ದಿನಾಂಕ 16.03.2025 ನೇ ಭಾನುವಾರದಂದು ಶ್ರೀಮತಿ ತುಳಸಿ ಉಪಾಧ್ಯಾಯ ಇವರ ಮನೆಯಲ್ಲಿ, ನೂತನವಾಗಿ ನಿರ್ಮಾಣವಾಗಲಿರುವ ಶಿಶುಮಂದಿರದ ಕಟ್ಟಡಕ್ಕೆ ಎಪ್ಪತ್ತು ಸಾವಿರ ರೂಪಾಯಿ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಸಂಧರ್ಭ ಶ್ರೀ ಸ್ಪೂರ್ತಿ ಧ್ವನಿ ಟ್ರಸ್ಟ್ ನ ಅಧ್ಯಕ್ಷರಾದ – ವತ್ಸಲಾ ಎನ್ ಭಟ್ , ಉಪಾಧ್ಯಕ್ಷರಾದ -ಶ್ಯಾಮಲ ಎಸ್ ಐತಾಳ್, ಕಾರ್ಯದರ್ಶಿ – ಸುಜಾತ ಉದಯ ಕುಮಾರ್, ಖಜಾಂಚಿ -ಸತ್ಯವತಿ ಕವೀಶ್, ಹಾಗೂ ಸದಸ್ಯರುಗಳಾದ ಶೈಲಜಾ ಪುದುಕೋಳಿ, ತುಳಸಿ ಉಪಾಧ್ಯಾಯ, ಜಯಲಕ್ಷ್ಮಿ ಸುರೇಶ್ ಮತ್ತು ಸುಜಾತ ಭಂಡಾರಿ ಕೇಶವ ಶಿಶುಮಂದಿರ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಉದಯನಾರಾಯಣ, ಯಜ್ನೇಶ ಐತಾಳ, ಕಾರ್ತಿಕ್ ಪೈ, ಯೋಗೀಶ್ ಸನಿಲ್, ಪ್ರಮೋದ್ ಹಾಗೂ ನೂತನ ಕಟ್ಟಡ ನಿರ್ಮಾಣ ಸಮಿತಿಯ ಜಯಪ್ರಕಾಶ್ ಸೂರಿಂಜೆ, ವರುಣ್ ಚೌಟ, ನವೀನ್ ಬರ್ಕೆ, ಚಂದ್ರಶೇಖರ್ MCC ಮುಂತಾದವರು ಉಪಸ್ಥಿತರಿದ್ದರು.