ಎರಡು ವರ್ಷದ ಹಿಂದೆ ಕೇಂದ್ರ ಸರಕಾರದಿಂದ ನಿಷೇಧಕ್ಕೆ ಒಳಗಾಗಿದ್ದ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆ ಮತ್ತೆ ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ ಬಿಚ್ಚುತ್ತಿರುವಂತೆ ಕಾಣಿಸುತ್ತದೆ.
ಇತ್ತೀಚೆಗೆ ಬೆಳಕಿಗೆ ಬಂದ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪ್ರಕರಣಕ್ಕೂ ಪಿಎಫ್‌ಐಗೂ ನಿಕಟ ಸಂಪರ್ಕ ಇರುವುದು ತನಿಖೆ ವೇಳೆ ಕಂಡು ಬಂದಿದೆ. ಈ ಬಳಿಕ ಜಿಲ್ಲಾ ಗುಪ್ತಚಾರ ಇಲಾಖೆ ಅಲರ್ಟ್ ಆಗಿದೆ.

ಎರಡು ತಿಂಗಳ ಹಿಂದೆ ಪಿಸ್ತೂಲು ಶುಚಿಗೊಳಿಸುತ್ತಿದ್ದಾಗ, ವಾಮಂಜೂರಿಲ್ಲಿ ಮುಸ್ಲಿಂ ಧರ್ಮಗುರುವಿನ ಮಿಸ್ ಫೈಯರ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಇದರ ಹಿಂದಿರುವ ಕೈಗಳ ಹುಡುಕಾಟಕ್ಕೆ ಇಳಿದಿತ್ತು. ಸಿಸಿಬಿ ಪೊಲೀಸರು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು.
ಈ ವೇಳೆ ಮಿಸ್ ಫೈರ್ ಆದ ಪಿಸ್ತೂಲ್ ಅಕ್ರಮವಾಗಿದ್ದು ಯಾವುದೇ ಪರವಾನಿಗೆ ಹೊಂದಿರಲಿಲ್ಲ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲದೇ ಇದನ್ನು ಬಳಿಸಿ ಧರ್ಮಗುರು ಸಫ್ಘಾನ್ ಮೇಲೆ ಮಿಸ್ ಫೈರ್ ಮಾಡಿದ್ದು ಅದ್ದು ಅಲಿಯಾಸ್ ಬದ್ರುದ್ದೀನ್ ಎಂದು ತನಿಖೆಯಲ್ಲಿ ಬಯಲಾಗಿತ್ತು ಆತನನ್ನು ಬಂಧಿಸಿದ ಪೊಲೀಸರು ಅವನನ್ನು ಮತ್ತಷ್ಟೂ ವಿಚಾರಣೆಗೆ ಒಳಪಡಿಸಿದ್ದರು.
ಈ ವೇಳೆ ಸಿಸಿಬಿ ಪೊಲೀಸರಿಗೆ ಮಂಗಳೂರಿನಲ್ಲಿ ಕೇರಳ ಮೂಲದ ತಂಡವೊಂದು ಬೃಹತ್ ಅಕ್ರಮ ಪಿಸ್ತೂಲ್ ಮಾರಾಟ ಜಾಲ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಕೇರಳ ಮೂಲದ ನಟೋರಿಯಸ್ ಶಸ್ತ್ರಾಸ್ತ್ರ ಡೀಲರ್ ಸೇರಿದಂತೆ ಐವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಈ ವೇಳೆ ಬಂಧಿತ ಆರೋಪಿಗಳು ಪಿಎಫ್‌ಐ ಜೊತೆ ನಂಟು ಹೊಂದಿರುವ ಬಗ್ಗೆ ಬಾಯ್ದಿಟ್ಟಿದ್ದಾರೆ ಎನ್ನಲಾಗಿದೆ.
ಕೇರಳದ ಮೂಲದ ಖತರ್ನಾಕ್ ಕ್ರಿಮಿನಲ್ ಗಳಾದ ಅಬ್ದುಲ್ ಲತೀಫ್, ಮನ್ಸೂರು ನೌಫಾಲ್, ಮಹಮ್ಮದ್ ಅಸ್ಟರ್ ಹಾಗೂ ಮಹಮ್ಮದ್ ಸಾಲಿ ಬಂಧಿತರು. ಪೊಲೀಸರು ಇವರಿಂದ ಮೂರು ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಪಡಿಸಿದ್ದಾರೆ. ಈ ವೇಳೆ ಮುಂಬಯಿಯಿಂದ ನಡೆಯುತ್ತಿರುವ ಬೃಹತ್ ಅಕ್ರಮ ಪಿಸ್ತೂಲ್ ಸರಬರಾಜು ಜಾಲ ಬೆಳಕಿಗೆ ಬಂದಿದೆ. ಆರೋಪಿಗಳು ಸಮಾಜ ಘಾತಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.
ನಿಷೇಧಿತ ಪಿಎಫ್‌ಐ ಮುಖಂಡರಿಗೆ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ ಪಿಸ್ತೂಲ್ ನೀಡಿದ್ದ. ಅಲ್ಲದೇ ಈತ ಪಿಎಫ್‌ಐ ಮುಖಂಡರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ. ವಾಮಂಜೂರಿನಲ್ಲಿ ಮಿಸ್ ಫೈರ್ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೂ ಅಬ್ದುಲ್ ಲತೀಫ್ ಪಿಸ್ತೂಲ್ ನೀಡಿದ್ದ. ಈ ಪ್ರಕರಣದಲ್ಲಿ ಬಂಧಿತ ಬದ್ರುದ್ದೀನ್ ಮತ್ತು ಇಮ್ರಾನ್ ಇಬ್ಬರೂ ನಿಷೇಧಿತ ಪಿಎಫ್‌ಐ ಮುಖಂಡರಾಗಿದ್ದರು. ರೌಡಿ ಶೀಟರ್ ಬದ್ರುದ್ದೀನ್ ಯಾನೆ ಅದ್ದುವಿನ ಪಿಸ್ತೂಲ್ಲಿಂದ ಗುಂಡು ಹಾರಿತ್ತು. ಬದ್ರುದ್ದೀನ್ಹ ಇಮ್ರಾನ್ ಪಿಸ್ತೂಲ್ ನೀಡಿದ್ದ. ಇಮ್ರಾನ್ ಪಿಸ್ತೂಲ್ ಸರಬರಾಜು ಮಾಡಿದ್ದೇ ಅಬ್ದುಲ್ ಲತೀಫ್. ಘಟನೆಯಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದ.
ಬಂಧಿತ ಸಫಾನ್ ಮಾತ್ರವಲ್ಲದೆ, ಇತರೆ ಆರೋಪಿಗಳಾದ ಅಬ್ದುಲ್ ಲತೀಫ್, ಮನ್ಸೂರು, ನೌಫಾಲ್, ಮಹಮ್ಮದ್ ಅಸ್ಟರ್. ಮಹಮ್ಮದ್ ಸಾಲಿ ಕೂಡ ಪಿಎಫ್‌ಐ ನಂಟು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ನಿಷೇಧಿತ ಪಿಎಫ್‌ಐ ಮುಖಂಡರ ಕೈಗೆ ಗನ್ ಬಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಅಬ್ದುಲ್ ಲತೀಫ್ ಇನ್ನೂ ಹಲವೆಡೆ ಪಿಸ್ತೂಲ್ ಸರಬರಾಜು ಮಾಡಿರುವುದು ಪತ್ತೆಯಾಗಿದ್ದು. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.