Mangalore and Udupi news
ಅಪರಾಧದೇಶ- ವಿದೇಶ

400 ಕ್ರೈಸ್ತ ಯುವತಿಯರು ಲವ್ ಜಿಹಾದ್ ಒಳಗಾಗಿ ನಾಪತ್ತೆ” – ಮಾಜಿ ಶಾಸಕ ಪಿ.ಸಿ. ಚಾರ್ಜ್ ಗಂಭೀರ ಆರೋಪ

ತಿರುವನಂತಪುರಂ (ಕೇರಳ): ಲವ್ ಜಿಹಾದ್ ವಿಚಾರದಲ್ಲಿ ಕೇರಳದ ಮೀನಾಚಿಲ ತಾಲೂಕಿನಲ್ಲಿ ಸುಮಾರು 400 ಕ್ರೈಸ್ತ ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಪಿ.ಸಿ. ಜಾರ್ಜ್ ಗಂಭೀರ ಆರೋಪ
ಮಾಡಿದ್ದಾರೆ. ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲದೆ, ಕ್ರಿಶ್ಚಿಯನ್ ಧರ್ಮಕ್ಕೂ ಕೂಡ ಈ ಲವ್ ಜಿಹಾದ್ ಪಿಡುಗು ಅಂಟಿಕೊಂಡಿರುವುದರ ಬಗ್ಗೆ ಸಂಶಯವೇ ಇಲ್ಲ ಎಂದಿದ್ದಾರೆ. ಕಾಣೆಯಾದ 400 ಕ್ರಿಶ್ಚಿಯನ್ ಹುಡುಗಿಯರ ಪೈಕಿ ಇಲ್ಲಿಯವರೆಗೆ ಕೇವಲ 41 ಯುವತಿಯರನ್ನು ಮಾತ್ರ ಮರಳಿ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

“24 ವರ್ಷ ಪೂರ್ವವೇ ವಿವಾಹ – ಕೇರಳದ ಪೋಷಕರಿಗೆ ಜಾರ್ಜ್ ಸಲಹೆ”

ನಾವೇನು ಕೇರಳದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಕ್ರೈಸ್ತ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ 24 ವರ್ಷದೊಳಗೆ ವಿವಾಹ ಮಾಡಿಸಬೇಕು ಎಂಬುದು ಅತ್ಯಗತ್ಯ ಎಂದು ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.

ಸ್ಫೋಟಕ ವಶಪಡಿಸಿಕೊಂಡ ಘಟನೆಗೂ ಸಂಬಂಧ?

ಇತ್ತೀಚೆಗೆ ಎರಾಟ್ಟುಪೇಟದಲ್ಲಿ ಹೆಚ್ಚಿನ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಮಾತನಾಡಿದ ಪಿ.ಸಿ. ಜಾರ್ಜ್, “ಇಡೀ ರಾಜ್ಯವನ್ನು ನಾಶ ಮಾಡಲು ಈ ಸ್ಪೋಟಕಗಳು ಸಾಕಾಗುತ್ತಿದ್ದವು” ಎಂಬ ಗಂಭೀರ ಆರೋಪ ಮಾಡಿದರು.

ಈ ಹೇಳಿಕೆಗಳು ಕೇರಳದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ರಾಜ್ಯದ ನಾಯಕರು ಮತ್ತು ಪೌರ ಸಮುದಾಯಗಳು ಈ ಕುರಿತು ಪ್ರತಿಕ್ರಿಯಿಸುವ ನಿರೀಕ್ಷೆಯಿದೆ.

Related posts

Leave a Comment